ಸಿದ್ದಾಪುರ ಮಾರ್ಗ ಮಧ್ಯೆ ಮಣ್ಣುಗುಡ್ಡೆ ವಾಹನ ಸಂಚಾರಕ್ಕೆ ಅಡ್ಡಿ

ಜನವಾಹಿನಿ NEWS ಸಿದ್ದಾಪುರ : ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾದ ಸಿದ್ದಾಪುರ – ವಿರಾಜಪೇಟೆ ರಸ್ತೆ ಮಧ್ಯೆ ಜಯಲಕ್ಷ್ಮಿ ಬೇಕರಿ ಎದುರು ಚರಂಡಿ ಹೂಳೆತ್ತಲಾಗಿದ್ದು, ತ್ಯಾಜ್ಯಮಿಶ್ರಿತ ಮಣ್ಣು ಗುಡ್ಡೆಯನ್ನು ಅಲ್ಲೇ ಹಾಕಲಾಗಿದೆ ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಪಿಕ್ ಜಾಮ್ ಸಮಸ್ಯೆ ಏರ್ಪಟ್ಟಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಅನುಭವಿಸುವಂತಾಗಿದೆ. ಮೊದಲೇ ಕಿರಿದಾಗಿರುವ ಈ ರಸ್ತೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಣ್ಣು ರಾಶಿ ಹಾಗೆಯೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಸ್ಥಳೀಯ ಪಂಚಾಯತಿ ನಿರ್ಲಕ್ಯವೇ ಇದಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು […]
ಕೊಡಗು ಪತ್ರಕರ್ತರ ಸಂಘದಿಂದ ಅರ್ಥ ಪೂರ್ಣ ಪತ್ರಿಕಾ ದಿನಾಚರಣೆ : ಮನುಜ ಮತದ ತತ್ವದಡಿ ಕರ್ತವ್ಯ ಪರರಾಗಿ. – ಸಾಬು ವರ್ಗಿಸ್ ಕರೆ

ಜನವಾಹಿನಿ NEWS ಮಡಿಕೇರಿ : ವಿಶ್ವವೇ ಮೆಚ್ಚುವ ಮಹಾತ್ಮಾ ಗಾಂಧೀಜಿ ಮತ್ತು ಜ್ಞಾನ ಸಂಪನ್ನರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳಂತೆ ನಾವೆಲ್ಲರೂ ಮನುಜರು ಎನ್ನುವ ವಿಶಾಲ ಚಿಂತನೆಗಳಡಿ ನಾವೆಲ್ಲರೂ ಕರ್ತವ್ಯ ಪರರಾಗಬೇಕೆಂದು ಸಮಾಜಸೇವಕರು ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಸಾಬು ವರ್ಗಿಸ್ ಕರೆ ನೀಡಿದರು. ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಬಿ. ಎಸ್. ಗೋಪಾಲಕೃಷ್ಣ ರಸ್ತೆಯಲ್ಲಿನ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ “ಪತ್ರಿಕಾ ದಿನಾಚರಣೆ” ಮತ್ತು ವಾರ್ಷಿಕ ದತ್ತಿ […]
ಮಾದಕ ವಸ್ತು ಸೇವಿಸಿ ಅಸಭ್ಯ ವರ್ತನೆ ಆರೋಪಿಗಳು ಅರೆಸ್ಟ್

ಜನವಾಹಿನಿ NEWS : ಬಂಟ್ವಾಳ ತಾಲೂಕು ಪುದು ಗ್ರಾಮದ 10ನೇ ಮೈಲುಕಲ್ಲು ಸಮೀಪದ ಸುಜೀರು ಹೊಳೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದಂತೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ರಕೀಝ್ ಹಾಗೂ ಅಬ್ದುಲ್ ರಫತ್ ಎಂಬವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ಇಬ್ಬರೂ ಸಾರ್ವಜನಿಕ ಸ್ಥಳದಲ್ಲೇ ಮಾದಕ ವಸ್ತು ಸೇವಿಸಿ ಅಶಾಂತ ವಾತಾವರಣ ಸೃಷ್ಟಿಸುತ್ತಿದ್ದುದನ್ನು ಕಂಡು ತಕ್ಷಣ ವಶಕ್ಕೆ […]
ಎಸ್ಐಆರ್ ಕುರಿತ ವಿಚಾರ ಸಂಕೀರ್ಣ : ನೈಜ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರ : ನವೀನ್ ಕುಮಾರ್

ಜನವಾಹಿನಿ NEWS ಸಿದ್ದಾಪುರ : ಚುನಾವಣಾ ಆಯೋಗವು (ECI) ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು, ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಪಕ್ಷದ ಹಾಸನ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್ ನವೀನ್ ಕುಮಾರ್ ದೂರಿದ್ದಾರೆ. ಸಿದ್ದಾಪುರ ಪಂಚಾಯತಿ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಮಾರ್ಕ್ಸ್ ವಾದಿ ಸಿಪಿಐ(ಎಂ) ವತಿಯಿಂದ ಆಯೋಜಿಸಿದ್ದ ಎಸ್ಐಆರ್ (SIR) ಕುರಿತ ವಿಚಾರ ಸಂಕೀರ್ಣವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಡವರು, ಕಾರ್ಮಿಕರು, ದಲಿತರು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ […]
ಪಲ್ಸ್ ಪೊಲಿಯೊ ಮನೆ ಮನೆ ಭೇಟಿ

ಜನವಾಹಿನಿ NEWS ಮಡಿಕೇರಿ : ನಿನ್ನೆ ನಡೆದ ರಾಷ್ಟ್ರೀಯ ಪಲ್ಸ್ ಪೆÇೀಲಿಯೊ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗೆ ಪತ್ತೆ ಹಚ್ಚಲು 2 ದಿನ ಮನೆ ಮನೆಗಳಿಗೆ ಭೇಟಿ ಮಾಡುವ 2ನೇ ದಿನ ಮೂರ್ನಾಡು ವ್ಯಾಪ್ತಿಯ ಹೂಕಾಡು ಪೈಸಾರಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಲಸಿಕೆ ಪಡೆಯಾದ ಮಕ್ಕಳಿಗೆ ಪತ್ತೆ ಹಚ್ಚಿ ಲಸಿಕೆ ನೀಡುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ ತಂಡಗಳು ಕಾರ್ಯನಿರ್ವಹಿಸಿದರು. ತಂಡಗಳ ಕಾರ್ಯವನ್ನು ಮೇಲ್ವಿಚಾರಣೆಗಾಗಿ ಡಾ.ಸನತ್ ಕುಮಾರ್ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಮತ್ತು ಪ್ರಭಾರ […]
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ನೋಂದಣಿಗೆ ಮನವಿ

ಜನವಾಹಿನಿ NEWS ಮಡಿಕೇರಿ : ಕರ್ನಾಟಕ ಸರ್ಕಾರವು 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾಗೊಳಿಸಲು ಅಧಿಸೂಚಿಸಿದೆ. ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಹಾಗೂ ಅಡಿಕೆ ಬೆಳೆಗೆ ವಿಮಾ ಘಟಕ ಅಧಿಸೂಚಿಸಲಾಗಿದೆ. ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಮತ್ತಿತರ ಮಾಹಿತಿಯನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗಿದೆ. 2026-27 ನೇ ಸಾಲಿನಲ್ಲಿ ಮುಂಗಾರು […]
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾಗಿ ಪಿ.ಆರ್. ರಾಜೇಶ್, ಕಾಯ೯ದಶಿ೯ಯಾಗಿ ಡಾ.ಚೇತನ್ ಆಯ್ಕೆ

ಜನವಾಹಿನಿ NEWS ಮಡಿಕೇರಿ :ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪೂಳಕಂಡ ರಾಜೇಶ್ ಮತ್ತು ಕಾಯ೯ದಶಿ೯ಯಾಗಿ ಡಾ.ಚೇತನ್ ಜಿ.ಡಿ. ಆಯ್ಕೆಯಾಗಿದ್ದಾರೆ. ನೂತನ ವಲಯ ಸೇನಾನಿಯಾಗಿ ಪೊನ್ನಚ್ಚನ ಮಧುಸೂದನ್ ಆಯ್ಕೆಯಾಗಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ 22 ನೇ ವಷ೯ದ ಅಧ್ಯಕ್ಷರಾಗಿ ಪಿ.ಆರ್. ರಾಜೇಶ್, ಕಾಯ೯ದಶಿ೯ಯಾಗಿ ಡಾ.ಚೇತನ್ ಜಿ.ಡಿ.ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 4 ರಂದು ಶನಿವಾರ ಮಡಿಕೇರಿ ಕೆಳಗಿನ ಗೌಡ ಸಮಾಜದಲ್ಲಿ ಆಯೋಜಿತವಾಗಿದೆ. ಬೆಂಗಳೂರಿನ ರೋಟರಿ ಜಿಲ್ಲೆ3191ನ ಮಾಜಿ […]
ಧಾರ್ಮಿಕ ಚೌಕಟ್ಟಿನೊಳಗೆ ಸಮಾಜಮುಖಿ ಕಾರ್ಯ ಶ್ಲಾಘನೀಯ – ಟಿ.ಎಂ. ಶಾಹೀದ್ ತೆಕ್ಕಿಲ್

ಕಡಂಗದಲ್ಲಿ ಅಸ್ಮಾಹುಲ್ ಹುಸ್ನಾ ಮಜ್ಲಿಸ್ ಹಾಗೂ ಸ್ವಲಾತ್ ಸಮರ್ಪಣೆ ಜನವಾಹಿನಿ NEWS ಚೆಯ್ಯಂಡಾಣೆ : ಸಮುದಾಯದ ಜನರು ಧಾರ್ಮಿಕ ಚೌಕಟ್ಟಿನೊಳಗೆ ಸಮಾಜಮುಖಿ ಕೆಲಸ ಕಾರ್ಯ ಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷರು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಹೀದ್ ತೆಕ್ಕಿಲ್ ಹೇಳಿದರು. ಇವರು ಕಡಂಗ ಬದ್ರಿಯಾ ಮಸೀದಿಯ ಸಮೀಪದಲ್ಲಿ ಆಯೋಜಿಸಿದ ಅಸ್ಮಾಹುಲ್ ಹುಸ್ನಾ ಮಜ್ಲಿಸ್ ಹಾಗೂ ಸ್ವಲಾತ್ ಸಮರ್ಪಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕಳೆದ 5 ವರ್ಷದಿಂದ ಈ […]
ರೋಗಗಳ ಪತ್ತೆಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ : ಡಾಕ್ಟರ್ ನಿತ್ಯಪ್ರಿಯ

ಜನವಾಹಿನಿ NEWS ಸಿದ್ದಾಪುರ :ಇಂದಿನ ಸ್ಥಿತಿಗತಿಯಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಅತ್ಯಗತ್ಯ, ತಪಾಸಣೆಯಿಂದ ಮಾತ್ರ ಕಾಯಿಲೆಗಳನ್ನು ಪತ್ತೆಹಚ್ಚಲು ಸಾಧ್ಯ, ಇದಕ್ಕೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿ ಎಂದು ಡಾ.ನಿತ್ಯಪ್ರಿಯ ಅಭಿಪ್ರಾಯ ಪಟ್ಟಿದ್ದಾರೆ. ಹಿಲ್ ಬ್ಲೂಮ್ ಹೆಲ್ತ್ ಕೇರ್ ವತಿಯಿಂದ ಅಭ್ಯತ್ ಮಂಗಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿದ್ದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. […]
ಶಾಸಕರೇ ಡಾಕ್ಟರ್ ಆದರು : ಅಭ್ಯತ್ ಮಂಗಳ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿ ಗಮನ ಸೆಳೆದ ಮಂತರ್ ಗೌಡ

ಜನವಾಹಿನಿ NEWS ಮಡಿಕೇರಿ : ಅಭ್ಯತ್ ಮಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಲ್ ಬ್ಲೂಮ್ ಹೆಲ್ತ್ ಕೇರ್ ಹಾಗೂ SLV ಗ್ರೂಪ್ ಕುಶಾಲನಗರ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಸ್ವತಃ ತಾವೇ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಎಲ್ಲರ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಅವರು, “ಹಣಕಾಸು ಕಳೆದುಕೊಳ್ಳಬಹುದು, ಸಂಪಾದಿಸಿದ ಆಸ್ತಿ […]