ಶಾಸಕರೇ ಡಾಕ್ಟರ್ ಆದರು : ಅಭ್ಯತ್ ಮಂಗಳ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿ ಗಮನ ಸೆಳೆದ ಮಂತರ್ ಗೌಡ

ಜನವಾಹಿನಿ NEWS ಮಡಿಕೇರಿ : ಅಭ್ಯತ್ ಮಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಲ್ ಬ್ಲೂಮ್ ಹೆಲ್ತ್ ಕೇರ್ ಹಾಗೂ SLV ಗ್ರೂಪ್ ಕುಶಾಲನಗರ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಸ್ವತಃ ತಾವೇ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಎಲ್ಲರ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಅವರು, “ಹಣಕಾಸು ಕಳೆದುಕೊಳ್ಳಬಹುದು, ಸಂಪಾದಿಸಿದ ಆಸ್ತಿ […]
ಕಡಂಗ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಜನವಾಹಿನಿ NEWS ಚೆಯ್ಯಂಡಾಣೆ : ಸ್ಥಳೀಯ ಅರಪಟ್ಟು ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಎಚ್ಒ ವೇದಾವತಿ ಲಸಿಕೆ ಹಾಕುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಾಣಿ,ಆಶಾ ಕಾರ್ಯಕರ್ತೆ ಸುಮಿತ್ರ,ಅಂಗನವಾಡಿ ಕಾರ್ಯಕರ್ತೆ ಸೌಮ್ಯ,ಕವಿತಾ,ರೇಖಾ,ಸಿಬ್ಬಂದಿಗಳು,ಮತಿತ್ತರರು ಉಪಸ್ಥಿತರಿದ್ದರು.
ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಜನವಾಹಿನಿ NEWS ಚೆಯ್ಯಂಡಾಣೆ : ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸ್ಥಳ ದಾನಿಗಳು ಹಾಗೂ ನಿವೃತ ಸೈನಿಕ ಚೆಯ್ಯಂಡ ಲವ ಅಪ್ಪಚ್ಚು ಲಸಿಕೆ ಹಾಕುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಚು ಗೌತಮಿ, ಶುಸ್ರೂಷಕಿ ಪೂಜಾ ,ಆಶಾ ಕಾರ್ಯಕರ್ತೆ ರಾಜೇಶ್ವರಿ,ಅಂಗನವಾಡಿ ಕಾರ್ಯಕರ್ತೆ ತಾರ,ಸಿಬ್ಬಂದಿಗಳಾದ ಮಂಜುಳಾ,ಭವಾನಿ,ಮತಿತ್ತರರು ಉಪಸ್ಥಿತರಿದ್ದರು.
ಇನ್ನರ್ ವೀಲ್ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್, ಕಾಯ೯ದಶಿ೯ಯಾಗಿ ಮೖಣಾಲಿನಿ ಚಿಣ್ಣಪ್ಪ ಆಯ್ಕೆ

ಜನವಾಹಿನಿ NEWS ಮಡಿಕೇರಿ : ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಮತ್ತು ಕಾಯ೯ದಶಿ೯ಯಾಗಿ ಮೖಣಾಲಿನಿ ಚಿಣ್ಣಪ್ಪ ಆಯ್ಕೆಯಾಗಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಜುಲೈ 1 ರಂದು ಬುಧವಾರ ಬೆಳಗ್ಗೆ 11.30 ಗಂಟೆಗೆ ಇನ್ನರ್ ವೀಲ್ ಸಂಸ್ಥೆಯ 51 ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ , ಕಾಯ೯ದಶಿ೯ಯಾಗಿ ಮೖಣಾಲಿನಿ ಚಿಣ್ಣಪ್ಪ ಅಧಿಕಾರ ಸ್ವೀಕರಿಸಲಿದ್ದು, ಇನ್ನರ್ ವೀಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಡಾ. ಜಯಲಕ್ಷ್ಮಿ ಪಾಟ್ಕರ್ ಪದಗ್ರಹಣ ನೆರವೇರಿಸಲಿದ್ದಾರೆ.
ಕೊಡಗು ಫತ್ರಕತ೯ರ ಸಂಘ (ರಿ)ದ ವಾಷಿ೯ಕ ಪ್ರಶಸ್ತಿ ಪ್ರಕಟ – ಅತ್ಯುತ್ತಮ ವರದಿಗಳಿಗಾಗಿ 8 ಪತ್ರಕತ೯ರಿಗೆ ಪ್ರಶಸ್ತಿ

ಜನವಾಹಿನಿ NEWS ಮಡಿಕೇರಿ : ಕೊಡಗು ಪತ್ರಕತ೯ರ ಸಂಘ (ರಿ) ದ ವತಿಯಿಂದ ನೀಡಲಾಗುವ 2025 ನೇ ವಷ೯ದ ಅತ್ಯುತ್ತಮ ವರದಿಗಳಿಗಾಗಿನ ಪ್ರಶಸ್ತಿಗಳು ಘೋಷಣೆಯಾಗಿದೆ. ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಅವರು ಅತ್ಯುತ್ತಮ ಮಾನವೀಯ ವರದಿಗಾಗಿ ತಮ್ಮ ಮಾತ್ರಶ್ರೀ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯು ಶಕ್ತಿ ಪತ್ರಿಕೆಯಲ್ಲಿ ಪ್ರಕಟಿತ .ನಿಸ್ವಾಥ೯ ಸೇವೆ ಮೂಲಕ ಮೂಕಪ್ರಾಣಿಗಳಿಗೆ ಆಸರೆಯಾದ ಭವಾನಿ ಎಂಬ.ಶೀಷಿ೯ಕೆಯ ವರದಿಗಾಗಿ . ಅಶ್ರಫ್ ಚೆಯ್ಯಂಡಾಣೆ ಇವರಿಗೆ […]
ಅಪಘಾತಕ್ಕೊಳಗಾಗಿದ್ದ ಪ್ರವಾಸಿಗರಿಗೆ ಚಿಕಿತ್ಸೆ ಕೊಡಿಸಿದ ಅಕ್ಕಪಡೆ ಸಿಬ್ಬಂದಿಗಳು

ಜನವಾಹಿನಿ NEWS ಮಡಿಕೇರಿ : ಜಿಲ್ಲಾ ಅಕ್ಕಪಡೆ ಸಿಬ್ಬಂದಿಗಳು ಮಹಿಳಾ ದೂರಿನ ಸಂಬಂಧ ತೆರಳುತ್ತಿದ್ದ ಸಂದರ್ಭ ಕೆದಕಲ್ ಬಳಿ ಪ್ರವಾಸಿಗರ ಬೈಕ್ ಒಂದು ನಿಯಂತ್ರಣ ತಪ್ಪಿ ಅಪಘಾತವಾಗಿ ಗಾಯಗೊಂಡಿದ್ದ ಪ್ರವಾಸಿಗರಿಬ್ಬರನ್ನು ಚಿಕಿತ್ಸೆಯ ಸಂಬಂಧ ಸುಂಟಿಕೊಪ್ಪ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.
ಸಿದ್ದಾಪುರದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ – ದುಶ್ಚಟಗಳಿಂದ ಭವಿಷ್ಯ ಹಾಳಾಗುತ್ತೆ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆಯ ಕಡೆ ಗಮನ ಹರಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ಎಎಸ್ಐ ರಾಜೇಶ್

ಜನವಾಹಿನಿ NEWS ಸಿದ್ದಾಪುರ : ಮಾದಕ ವಸ್ತುಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳುಮಾಡಿ, ಅವರ ಭವಿಷ್ಯವನ್ನು ಕತ್ತಲೆಯೆಡೆಗೆ ಕೊಂಡೊಯ್ಯುತ್ತವೆ. ಯುವ ಜನತೆ ಇಂತಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಶಿಕ್ಷಣ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಿದ್ದಾಪುರ ಠಾಣೆಯ ಎಎಸ್ಐ ರಾಜೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಟ ವಿರುದ್ಧದ ಅಂತಾರಾಷ್ಟ್ರೀಯ ದಿನದ ಪ್ರಯುಕ್ತ ಸಿದ್ದಾಪುರ ಪೊಲೀಸ್ ಠಾಣೆ, ಇಕ್ರಾ ಪಬ್ಲಿಕ್ ಶಾಲೆ ಹಾಗೂ ಸಂತ ಅನ್ನಮ್ಮ […]
ಬಸ್ ಹಾಗೂ ಬೈಕ್ ಮುಖಾಮುಖಿ : ಬೈಕ್ ಸವಾರನ ಸ್ಥಿತಿ ಗಂಭೀರ

ಜನವಾಹಿನಿ NEWS ಸಿದ್ದಾಪುರ : ಬಸ್ – ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ವ್ಯಾಪ್ತಿಯ ಹಂಚಿಕಾಡು ಬಳಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಗಾಯಾಳು ಮಿಲನ್ ಎಂಬಾತನನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪಾಲಿಬೆಟ್ಟ ಪೊಲೀಸ್ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಓವರ್ ಟೇಕ್ ಭರದಲ್ಲಿ ಆಟೋಗೆ ಬಸ್ ಡಿಕ್ಕಿ : ಮಗುಚಿಬಿದ್ದ ಆಟೋ : ಚಾಲಕನಿಗೆ ಗಂಭೀರ ಗಾಯ

ಜನವಾಹಿನಿ NEWS ಸಿದ್ದಾಪುರ : ಓವರ್‌ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ವೊಂದು ಆಟೋಗೆ ಡಿಕ್ಕಿ ಪಡಿಸಿದೆ ಪರಿಣಾಮ ಆಟೋ ಪಲ್ಟಿಯಾಗಿದ್ದು, ಆಟೋ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಇಂಜಲಗೆರೆ ಬಳಿ ಸಂಭವಿಸಿದೆ. ವಿರಾಜಪೇಟೆ ಕಡೆಯಿಂದ ಸಿದ್ದಾಪುರಕ್ಕೆ ಸಾಗುತ್ತಿದ್ದ ಕ್ಲಾಸಿಕ್ ಬಸ್ ಮುಂದೆ ಹೋಗುತ್ತಿದ್ದ ಟಿಪ್ಪರ್ ವಾಹನವನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಮುಂದೆ ಇದ್ದ ಆಟೋಗೆ ಡಿಕ್ಕಿ ಪಡಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಆಟೋ ಪಲ್ಟಿಯಾಗಿ ರಸ್ತೆ ಬದಿಯ ಗೇಟಿಗೆ ಅಪ್ಪಳಿಸಿ […]
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಭಾಗ್ಯರಾಜ್ ನಿಧನ

ಜನವಾಹಿನಿ NEWS ಚೆನ್ನೈ : ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ಕಥೆಗಾರ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಅವರು ಶನಿವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಗಲಿಕೆಯಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕೆ. ಭಾಗ್ಯರಾಜ್ ಅವರು, ಪತ್ನಿ ನಟಿ ಪೂರ್ಣಿಮಾ ಭಾಗ್ಯರಾಜ್, ಪುತ್ರ ನಟ ಶಾಂತನು ಭಾಗ್ಯರಾಜ್ ಹಾಗೂ ಪುತ್ರಿ ಸಾರಣ್ಯಾ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಭಾಗ್ಯರಾಜ್, ಕೆಲವೇ ದಿನಗಳ ಹಿಂದೆ ನಟಿ-ರಾಜಕಾರಣಿ ಖುಷ್ಬು ಸುಂದರ್ […]