Breaking News :

ಕೇಂದ್ರ ಸರ್ಕಾರದ ಬೇಜವಾಬ್ದಾರಿಯೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣ : ಕೊಡಗು ಕಾಂಗ್ರೆಸ್ ಆರೋಪ – ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ

  ಜನವಾಹಿನಿ NEWS ಮಡಿಕೇರಿ : ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಬೇಜವಾಬ್ದಾರಿಯಿಂದ ನೀಟ್ ಯುಜಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಆರೋಪಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ನೀಟ್ ಯುಜಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ವೈಫಲ್ಯದ ಹೊಣೆಗಾರಿಕೆಯನ್ನು ಸರಿಪಡಿಸುವ ಯಾವುದೇ ಮಹತ್ವದ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಪರೀಕ್ಷೇಗಳ ನಿರ್ವಹಣೆಯ ಜವಬ್ದಾರಿ ಹೊತ್ತಿರುವ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂಧ್ರ […]

ಮಲ್ಮಬೆಟ್ಟ ವಿವಾದಕ್ಕೆ ತೆರೆ ಎಳೆದ ಶ್ರೀ ಎಂ : ಬೆಟ್ಟದ ಜಾಗದಲ್ಲಿ ಉದ್ದೇಶಿತ ಯೋಜನೆಯನ್ನು ಕೈಗೊಳ್ಳಲ್ಲ – ಕೊಡಗನ್ನೇ ತೊರೆಯುವೆ..!

  ಜನವಾಹಿನಿ NEWS ಮಡಿಕೇರಿ : ಕೇರಳ ಮೂಲದ ಆಧ್ಯಾತ್ಮಿಕ ಗುರು ‘ಶ್ರೀ ಎಂ’ (ಮುಮ್ತಾಜ್ ಅಲಿ) ಅವರು ಕೊಡಗಿನ ಮಲ್ಮಾ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಧ್ಯಾನ ಮಂದಿರ, ಗೋಶಾಲೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯರು ಮತ್ತು ಪರಿಸರವಾದಿಗಳ ತೀವ್ರ ಪ್ರತಿಭಟನೆ, ವಿರೋಧದ ನಂತರ, ಅಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಗೌರವಿಸಿ ಆ ಸ್ಥಳವನ್ನು ತೊರೆಯಲು ನಿರ್ಧರಿಸಿರುವ ಅವರು ವಿವಾದಕ್ಕೆ ಕಾರಣವಾಗಿದ್ದ ಸ್ಥಳದಲ್ಲಿ ಯಾವುದೇ ಯೋಜನೆಯನ್ನು ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ […]

ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ : ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

  ಜನವಾಹಿನಿ NEWS ಮಡಿಕೇರಿ : ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯಸೌಧದಲ್ಲಿ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಶಕ್ತಿ ಯೋಜನೆ: ಶಕ್ತಿ ಯೋಜನೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದ್ದು, ಗೋಣಿಕೊಪ್ಪದಿಂದ-ಮೈಸೂರು, ಬೆಂಗಳೂರು ಮಾರ್ಗವಾಗಿ ಚಲಿಸುವ ಬಸ್ಸುಗಳ ಸಂಖ್ಯೆಯನ್ನು ರಜಾ ದಿನಗಳಲ್ಲಿ ಹೆಚ್ಚುವರಿ ಮಾಡಿ, ಸಾರ್ವಜನಿಕರು ರಜಾ ದಿನಗಳಲ್ಲಿ ಈ ಮಾರ್ಗವಾಗಿ ಹೆಚ್ಚು ಪ್ರಯಾಣಿಸುತ್ತಾರೆ. ನೂಕು-ನುಗ್ಗಲುಗಳಂತಹ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು ಕೂಡಲೇ […]

ಮೂರ್ನಾಡು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಜನವಾಹಿನಿ NEWS ಮಡಿಕೇರಿ : ಮೂರ್ನಾಡು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ 2026-27ನೇ ಸಾಲಿಗೆ ಪೂರ್ವ ಪ್ರಾರ್ಥಮಿಕ ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಯೋಗ ಮತ್ತು ಕರಾಟೆ ಶಿಕ್ಷಕರು, ಸಂಗೀತ ಮತ್ತು ನೃತ್ಯ ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿಯ ನೇಮಕಾತಿಗಾಗಿ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೂರ್ವ ಪ್ರಾರ್ಥಮಿಕ ಶಿಕ್ಷಕರ ವಿದ್ಯಾರ್ಹತೆ ಮೊಂಟೆಸರಿ/ಡಿಇಡಿ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಹೊಂದಿರಬೇಕು, ಕಂಪ್ಯೂಟರ್ ಶಿಕ್ಷಕರ ವಿದ್ಯಾರ್ಹತೆ ಬಿಸಿಎ/ಬಿಎಸ್‍ಸಿ/ಬಿಟೆಕ್/ಬಿಇ(ಐಟಿ/ಸಿಎಸ್/ಡಿಪೆÇ್ಲೀಮ), ಯೋಗ, ಕರಾಟೆ, ಸಂಗೀತ ಮತ್ತು ನೃತ್ಯ ಶಿಕ್ಷಕರು […]

ಜೂ.28ರಂದು ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

  ಜನವಾಹಿನಿ NEWS ಮಡಿಕೇರಿ : ಪಲ್ಸ್ ಪೊಲಿಯೋ ಅಭಿಯಾನ ಸಂಬಂಧ ಜೂನ್, 28 ರಂದು ಬೆಳಗ್ಗೆ 8 ಗಂಟೆಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಜಿಲ್ಲಾ ಆಸ್ಪತ್ರೆ) ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ನೀಡುವ ಮೂಲಕ ಚಾಲನೆ ದೊರೆಯಲಿದ್ದು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ 

  ಜನವಾಹಿನಿ NEWS ಸಿದ್ದಾಪುರ ; ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ತೂಬನಕೊಲ್ಲಿಯಲ್ಲಿ ನಡೆದಿದೆ ತೂಬನಕೊಲ್ಲಿ ನಿವಾಸಿ ಗಣೇಶ್ ಎಂಬುವವರ ಪುತ್ರ ಮಣಿಕಂಠ (25) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಎಸ್ಟೇಟ್ ನಲ್ಲಿ ಮ್ಯಾಕನಿಕ್ ಆಗಿ ಕೆಲಸ ಮಾಡುತ್ತಿದ್ದ ಮಣಿಕಂಠ ಮದ್ಯಾಹ್ನ ಊಟಕ್ಕೆಂದು ಮನೆಗೆ ಬಂದವನ್ನು ನೇಣಿಗೆ ಕೊರಳೊಡ್ಡಿ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ […]

ಪ್ರಕೃತ್ತಿ ವಿಕೋಪ ನಿರ್ವಹಣೆ ಉಸ್ತುವಾರಿ ಸಚಿವರಾಗಿ ಕೊಡಗಿಗೆ ಯುಟಿ ಖಾದರ್ ನೇಮಕ 

  ಜನವಾಹಿನಿ NEWS ಮಡಿಕೇರಿ : ಮುಂಗಾರು ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆಗೆ ಸಚಿವರ ನೇಮಕ ಮಾಡಲಾಗಿದ್ದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರ್ಗಮಿತ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕಾರ್ಮಿಕರ ಮೇಲೆ ಕಾಡಾನೆ ದಾಳಿ ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ.

    ಜನವಾಹಿನಿ NEWS ಸಿದ್ದಾಪುರ : ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಒಂಟಿ ಸಲವೊಂದು ಏಕಾಏಕಿ ದಾಳಿಗೆ ಮುಂದಾಗಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಪಾಯದಿಂದ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ನಡೆದಿದೆ. ಎಂದಿನಂತೆ ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಪ್ರತ್ಯಕ್ಷವಾದ ಆನೆಯೊಂದು ಕಾರ್ಮಿಕರನ್ನು ಅಟ್ಟಾಡಿಸಿದೆ. ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಎದ್ದುಬಿದ್ದು ಓಡಿದ್ದು, ಗಿಡಗಳ ನಡುವೆ ಓಡುವ  ಸಂದರ್ಭ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ […]

ಕೊಡಗು ವಿದ್ಯಾಲಯದಲ್ಲಿ ನಾಣ್ಯ ನೋಟುಗಳ ಪ್ರದಶ೯ನ

  ಜನವಾಹಿನಿ NEWS ಮಡಿಕೇರಿ : ನಗರದ ಕೊಡಗು ವಿದ್ಯಾಲಯದಲ್ಲಿ ಹೆಸರಾಂತ ನಾಣ್ಯ ಸಂಗ್ರಹಕಾರ ಪಿ.ಕೆ. ಕೇಶವಮೂರ್ತಿ ಅವರಿಂದ 177 ನೇ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಆಯೋಜಿತವಾಗಿತ್ತು. ಕೊಡಗು ವಿದ್ಯಾಲಯದ ಗ್ರಂಥಾಲಯದಲ್ಲಿ ಖ್ಯಾತ ನಾಣ್ಯಶಾಸ್ತ್ರಜ್ಞ ಹಾಗೂ ಅಂಚೆಚೀಟಿ ಸಂಗ್ರಹಕಾರರಾದ ಪಿ.ಕೆ. ಕೇಶವಮೂರ್ತಿ ತಮ್ಮ 177ನೇ ನಾಣ್ಯ ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಿದ್ದರು. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಪರೂಪದ ಹಾಗೂ ಐತಿಹಾಸಿಕ ಮಹತ್ವವುಳ್ಳ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ವೀಕ್ಷಿಸಿದರು. ವಿವಿಧ ಕಾಲಘಟ್ಟಗಳ ಇತಿಹಾಸ, […]

ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಗೆ ಡೈಮಂಡ್ ಪ್ಲಸ್ ಪ್ರಶಸ್ತಿ

  ಜನವಾಹಿನಿ NEWS ಮಡಿಕೇರಿ : ಅತ್ಯುತ್ತಮ ಸಾಮಾಜಿಕ ಸೇವಾ ಕಾಯ೯ಗಳಿಗಾಗಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯುವ ರೋಟರಿ ಜಿಲ್ಲಾ ಮಟ್ಟದ ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೈಸೂರಿನ ಮೈಸೂರು ಯೂನಿಯನ್ ಸಭಾಂಗಣದಲ್ಲಿ ರೋಟರಿ ಜಿಲ್ಲೆ 3181 ನ ವಾಷಿ೯ಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿಯ ವಿವಿಧ ಜಿಲ್ಲಾ ಯೋಜನೆಗಳ ಅತ್ಯುತ್ತಮ ಕಾಯ೯ನಿವ೯ಹಣೆಗಾಗಿ ಮಡಿಕೇರಿಯ ಮಿಸ್ಟಿ ಹಿಲ್ಸ್ ಸಂಸ್ಥೆಗೆ ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ […]