Breaking News :

ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ ಕೊಡಗಿನ ದಿವಾಕರ್ 

  ಜನವಾಹಿನಿ NEWS ಮಡಿಕೇರಿ : ಕೊಡಗಿನ ಯುವ ಪ್ರತಿಭೆ ಬಿ.ಎಫ್.ಸಿ. (B.FC) ತಂಡದ ಆಟಗಾರ ದಿವಾಕರ್ ಅವರು ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಗುಜರಾತಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಫುಟ್ಸಲ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈಗಾಗಲೇ ಇವರು ಸ್ಥಳೀಯ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಜನ ಮೆಚ್ಚುಗೆ ಗಳಿಸಿದ್ದಾರೆ.

ದೇವರಕೊಲ್ಲಿ ಬಳಿ ಬೈಕ್ -ಕಂಟೈನರ್ ನಡುವೆ ಅಪಘಾತ ; ಬೈಕ್ ಸವಾರರ ಸ್ಥಿತಿ ಗಂಭೀರ

  ಜನವಾಹಿನಿ NEWS ದೇವರಕೊಲ್ಲಿ  : ರಾಜ್ಯ ಹೆದ್ದಾರಿ 275ರ ದೇವರಕೊಲ್ಲಿ ಸಮೀಪ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಬಿಜಾಪುರ ಮೂಲದ ಮಾಹಂತೇಶ್ ಎಂದು ತಿಳಿದು ಬಂದಿದ್ದು ಇವರು ಪುತ್ತೂರಿನ ಟ್ಯಾಕೋ ಅರ್ಥ್ ಮೂವರ್ಸ್ ನ ಉದ್ಯೋಗಿ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.  

ಕರಡ ಕೀಮಲೆಕಾಡುವಿನಲ್ಲಿ ಮಳೆಗೆ ಕುಸಿದು ಬಿದ್ದ ಮನೆ-ಪ್ರಾಣಪಾಯದಿಂದ ಪಾರಾದ ಬಾಲಕ

  ಜನವಾಹಿನಿ NEWS ಚೆಯ್ಯಂಡಾಣೆ : ಬಾರಿ ಗಾಳಿ ಮಳೆಗೆ ಮನೆಯೊಂದು ಕುಸಿದು ಬಿದ್ದು ಬಾಲಕ ಪ್ರಾಣಪಾಯದಿಂದ ಪಾರಾದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಕೀಮಲೆಕಾಡು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರ ಮನೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.ಮನೆ ಕುಸಿದು ಬೀಳುವ ಸಂದರ್ಭ ಮನೆಯಲ್ಲಿದ್ದ ಮಂಜುನಾಥ್ ಪುತ್ರ ರಕ್ಷಿತ್ ಮನೆಯಿಂದ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜುನಾಥ್ ಹಾಗೂ ಪತ್ನಿ ಮಂಜುಳಾ ಕೆಲಸಕ್ಕೆ ತೆರಳಿದ […]

ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಕೊಡಗಿನ ಕುಂಜಿಲ ಗ್ರಾಮದ ಯುವಕ ಮೊಹಮ್ಮದ್ ಸವಾದ್ ಆಯ್ಕೆ

  ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲೆಯ ಕುಂಜಿಲ ಗ್ರಾಮದ ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರ ಮೊಹಮ್ಮದ್ ಸವಾದ್ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ವತಿಯಿಂದ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸೌತ್ ಕ್ಯಾಸ್ಟಲ್ ಯುನೈಟೆಡ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈ ಸಾಧನೆ ಗ್ರಾಮ ಹಾಗೂ ಜಿಲ್ಲೆಯ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅವರ ಆಯ್ಕೆಯು ಸ್ಥಳೀಯ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಮುಂದಿನ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲೆಂದು ಎಲ್ಲರೂ ಶುಭ […]

ಲವ್ ಜಿಹಾದ್, ಮತಾಂತರ ಕಡಿವಾಣಕ್ಕೆ ಇಲಾಖೆ ವಿಫಲ : ಭೋಜೆಗೌಡ ಆರೋಪ – ಜೂ.30ರ ಜನಜಾಗೃತಿ ಸಭೆಗೆ ಬೆಂಬಲ

  ಜನವಾಹಿನಿ NEWS ಮಡಿಕೇರಿ : ಜಿಲ್ಲೆಯಲ್ಲಿ ಲವ್ ಜಿಹಾದ್, ಮತಾಂತರ ವ್ಯಾಪಕವಾಗಿ ಹರಡುತ್ತಿದ್ದರು ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಖಂಡಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಭೋಜೆಗೌಡ ಆರೋಪಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಸರ್ಗಧಾಮದಲ್ಲಿ ಮುಸ್ಲಿಂ ಬಾಂಧವರು ನಡೆಸುವ ವಾಣಿಜ್ಯೋದ್ಯಮಕ್ಕೆ ನಮ್ಮ ತಕರಾರಿಲ್ಲ. ಆದರೆ, ಇಲ್ಲಿ ಸಾಕಷ್ಟು ಹಿಂದೂ ಯುವತಿಯರು ಕೆಲಸ ಮಾಡುತ್ತಿದ್ದಾರೆ. ಇದನ್ನೆ ಬಳಸಿಕೊಳ್ಳುತ್ತಿರುವ ಕೆಲವರು ಲವ್ ಜಿಹಾದ್, ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದು ಲವ್ ಜಿಹಾದ್, ಮತಾಂತರ ಪ್ರಕರಣಕ್ಕೆ ಪುಷ್ಠಿ […]

ಕ್ಷಯರೋಗ ಮುಕ್ತ ಅಭಿಯಾನ ಶಿಬಿರ

  ಜನವಾಹಿನಿ NEWS ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದಿಂದ ಪಾಲಿಬೆಟ್ಟ ಟಾಟಾ ಕಂಪನಿ ಲಿಮಿಟೆಡ್ ಪಾಲಿಬೆಟ್ಟ ಕ್ಯಾಂಪೇನ್ ನಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 100 ದಿನಗಳ ಕ್ಷಯ ಮುಕ್ತ ಅಭಿಯಾನ ಸಂಬಂಧ ಮಂಗಳವಾರ ಶಿಬಿರ ನಡೆಯಿತು. ಕ್ಷಯ ಗುರುತಿಸುವ ಸಂಬಂಧ ಕಫ ಸಂಗ್ರಹಣೆ ಹಾಗೂ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಅಂದರೆ ಕ್ಷಯ ರೋಗಾಣುಗಳು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಹೊರಬಂದ ರೋಗಾಣುಗಳು ಗಾಳಿಯ ಮುಖಾಂತರ ಆರೋಗ್ಯವಂತ ವ್ಯಕ್ತಿಯ ಮೂಗು ಮತ್ತು […]

ಮೈಸೂರಿನ ಅಬ್ಬೂರು ಗ್ರಾಮದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಮೇಳ 

  ಜನವಾಹಿನಿ NEWS ಮಡಿಕೇರಿ : ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಹಕಾರದಲ್ಲಿ ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಇವರ ವತಿಯಿಂದ ಜೂನ್, 24 ರಂದು ಬೆಳಗ್ಗೆ 9 ಗಂಟೆಗೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಅಬ್ಬೂರು ಗ್ರಾಮದ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳಕ್ಕೆ, ಮೈಸೂರಿನ ಹೆಸರಾಂತ ಕಂಪನಿಗಳಾದ ಇನ್ಫೋಸಿಸ್, ಜೆ.ಕೆ ಟೈರ್ಸ್, ಟಿ.ವಿ.ಎಸ್, ರಾಣೆ-ಮಡ್ರಾಸ್, ಟ್ರೈಟಾನ್ ವ್ಯಾಲ್ವ್ಸ್, ಆಟೋ ಮೋಟಿವ್ ಎಕ್ಸಲ್ಸ್, ಸುಪ್ರೀಮ್ ಫಾರ್ಮಾs ಸ್ಯುಟಿಕಲ್ಸ್ […]

ಜೂ.27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿ

  ಜನವಾಹಿನಿ NEWS ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ ಜಯಂತಿಯು ಜೂನ್, 27 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಶಾಸಕರಾದ ಡಾ.ಮಂತರ್ ಗೌಡ, ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್, ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್.ಅರುಣ್ ಮಾಚಯ್ಯ, ನಗರಸಭೆ […]

ಪ್ರತಿಷ್ಠಿತ ಡಿಜಿ & ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಭಾಜನ

  ಜನವಾಹಿನಿ NEWS ಸಿದ್ದಾಪುರ : ರಾಜ್ಯ ಪೊಲೀಸ್‌ ಇಲಾಖೆಯ 2025-26ನೇ ಸಾಲಿನ ಪ್ರತಿಷ್ಠಿತ ಡಿಜಿ & ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿಗೆ ಸಿದ್ದಾಪುರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಮಂಜುನಾಥ್  ಭಾಜನರಾಗಿದ್ದಾರೆ. ರಾಜ್ಯದಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪೊಲೀಸ್‌ ಮಹಾನಿರ್ದೇಶಕ ಮತ್ತು ಪೊಲೀಸ್‌ ಮಹಾನಿರೀಕ್ಷಕರಾದ ಎಂ.ಎ. ಸಲೀಂ ಅವರು ಪ್ರಶಸ್ತಿ ಪ್ರದಾನಕ್ಕೆ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿಂದುಮಣಿ ಅವರ ಶಿಫಾರಸಿನ ಮೇರೆಗ ಠಾಣಾಧಿಕಾರಿ […]

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಎಸ್.ಐ.ಆರ್ ಕಾರ್ಯಾಗಾರ

  ಜನವಾಹಿನಿ NEWS ಮಡಿಕೇರಿ : ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬಿ.ಎಲ್.ಎ 2 ರವರಿಗೆ ಎಸ್.ಐ.ಆರ್ ಕುರಿತು ತರಬೇತಿ ಕಾರ್ಯಾಗಾರ ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿ ಸಭಾಂಗಣದಲ್ಲಿ ನಡೆಯಿತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕೃಯೆ ಹೇಗೆ ನಡೆಯುತ್ತದೆ ಮತ್ತು ಅದಕ್ಕೆ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ 2 ಗಳು ಯಾವ ರೀತಿ ಜಾಗೃತಿಯಿಂದ ಕೆಲಸ ಮಾಡಬೇಕು ಎಂಬುದರ ಬಗ್ಗೆ ಕರ್ನಾಟಕ ಜಾಗೃತಿ ಸಮಿತಿಯ ನಿರ್ದೇಶಕರಾದ ಮೋಹನ್ ರವರು ಸಂಕ್ಷಿಪ್ತವಾಗಿ ವಿವರಣೆ […]