Breaking News :

ಮಡಿಕೇರಿಯಲ್ಲಿ ಇಂದು ಆಟೊ ಸಂಚಾರ ಬಂದ್, ರ‍್ಯಾಪಿಡೊ ವಿರುದ್ಧ ಪ್ರತಿಭಟನೆ


ಜನವಾಹಿನಿ ನ್ಯೂಸ್ ಮಡಿಕೇರಿ : ನಿಯಮಗಳನ್ನು ಉಲ್ಲಂಘಿಸಿ ರ‍್ಯಾಪಿಡೊ ಬೈಕ್‌ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಟೊ ಮಾಲೀಕರು ಮತ್ತು ಚಾಲಕರ ಸಂಘವು ಅ. 30ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರದಲ್ಲಿ ಆಟೊ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಕರೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರೋ ಸಂಘದ ಜಿಲ್ಲಾಧ್ಯಕ್ಷ ಮೇದಪ್ಪ, ‘ಬೇರೆ ಬೇರೆ ನಗರಗಳಲ್ಲಿದ್ದ ರ‍್ಯಾಪಿಡೊ ಇದೀಗ ಮಡಿಕೇರಿ ನಗರಕ್ಕೂ ಕಾಲಿರಿಸಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರ‍್ಯಾಪಿಡೊ ಬೈಕ್‌ ಚಾಲನೆ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿದೆ’ ಎಂದರು.

ವಾಣಿಜ್ಯ ಪರವಾನಗಿ ಹೊಂದದೇ ಸ್ವಂತ ಬಳಕೆಯ ಪರವಾನಗಿ ಹೊಂದಿರುವ ಬೈಕ್‌ಗಳನ್ನು ಬಾಡಿಗೆ ಆಧಾರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಜೊತೆಗೆ, ಬಾಡಿಗೆಗೆ ಬೈಕ್‌ ನೀಡುವ ಕೆಲವು ಕೇಂದ್ರಗಳಲ್ಲಿ ಪರವಾನಗಿಗಿಂತ ಅಧಿಕ ಬೈಕ್‌ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಇದರಿಂದ ಆಟೊ ಚಾಲಕರಿಗೆ ನಷ್ಟ ಉಂಟಾಗುತ್ತಿದೆ. ಇದರ ವಿರುದ್ಧ ನಮ್ಮ ಪ್ರತಿಭಟನೆ’ ಎಂದು ಹೇಳಿದರು.

30ರಂದು ಬೆಳಿಗ್ಗೆ 11ರಿಂದ ಮಹದೇವಪೇಟೆಯ ಎ.ವಿ.ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಜಾಥಾ ನಡೆಸಲಾಗುವುದು. ಈ ಮೂಲಕ ಇಂತಹ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಲಾಗುವುದು ಎಂದರು.

 

Share this article

ಟಾಪ್ ನ್ಯೂಸ್

More News