ಜನವಾಹಿನಿ ನ್ಯೂಸ್ ಮೂರ್ನಾಡು : ಇತ್ತೀಚೆಗೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ಮೈಸೂರಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ಮೂರ್ನಾಡು ಮತ್ತು ಸಿದ್ದಾಪುರದ ವಿದ್ಯಾರ್ಥಿಗಳು ಶೇ.100 ರಷ್ಟು ಫಲಿತಾಂಶ ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ನೃತ್ಯ ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳು :
ಮೂರ್ನಾಡಿನ ವಿದ್ಯಾರ್ಥಿಗಳಾದ ರಜತ್ ಸಿ.ಜೆ, ಶಿಲ್ಪಿತಾ ಬಿ.ಎಸ್, ದಕ್ಷಪ್ರಿಯ ಟಿ.ಪಿ ಹಾಗೂ ಸಿದ್ದಾಪುರದ ವಿದ್ಯಾರ್ಥಿಗಳಾದ ಬಿ.ಎಲ್. ಸಾನ್ವಿಕಾ, ಕೆ.ಎಸ್. ಶೃಂಚನ, ಎಂ. ವೃತ್ತಿಕಾ ಮತ್ತು ವಿ.ವಿ. ಅಮಯ.
ಈ ಎಲ್ಲಾ ವಿದ್ಯಾರ್ಥಿಗಳು ನೃತ್ಯ ಕಲಾ ಶಾಲೆಯ ನೃತ್ಯ ಗುರುಗಳಾದ ವಿದುಷಿ ಜಲಜಾ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ.
Total Views: 16







