Breaking News :

ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ: ಪ್ರಾಸ್ತವಿತ ಬಿಲ್ ನಲ್ಲಿ ಏನೇನಿದೆ?

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಸಂಸತ್‌ ನಲ್ಲಿ ಇಂದು ಮಂಡಿಸಿದ್ದಾರೆ.

ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹಾಗೂ ವಕ್ಫ್ ಕಾಯಿದೆ, 1995 ಅನ್ನು ʼಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ-1995ʼ ಎಂದು ಮರುನಾಮಕರಣ ಮಾಡುವ ಗುರಿಯೊಂದಿಗೆ ಇಂದು ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿದೆ.

ಪ್ರಾಸ್ತಾವಿತ ತಿದ್ದುಪಡಿ ಮಸೂದೆಯಲ್ಲೇನಿದೆ?

ಮಸೂದೆಯಲ್ಲಿ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ರಚನೆ ಸೇರಿವೆ. ಮಂಡಳಿಗಳು  ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಹೊಂದಿರುತ್ತದೆ.

ಮಸೂದೆಯ ಪ್ರಕಾರ, ಎಲ್ಲಾ ರಾಜ್ಯ ಮಂಡಳಿಗಳು ಮತ್ತು ಕೇಂದ್ರ ಮಂಡಳಿಯಲ್ಲಿ ಇಬ್ಬರು ಮಹಿಳೆಯರನ್ನು ನೇಮಿಸಲಾಗುತ್ತದೆ.

ವಕ್ಫ್ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದರ ಕುರಿತು ಜಿಲ್ಲಾಧಿಕಾರಿಯನ್ನು ತೀರ್ಪುಗಾರರನ್ನಾಗಿ ಮಾಡುವುದು ಮಸೂದೆ ಉದ್ದೇಶವಾಗಿದೆ.

1995ರ ಕಾಯಿದೆಯಲ್ಲಿ, ಅಂತಹ ನಿರ್ಧಾರಗಳನ್ನು ವಕ್ಫ್ ಟ್ರಿಬ್ಯೂನಲ್ ತೆಗೆದುಕೊಳ್ಳುತ್ತದೆ. ಈ ಅಧಿಕಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಆಸ್ತಿ ಕಬಳಿಕೆಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.

ಪ್ರಸ್ತಾವನೆಯು ಬೋಹರಾ ಮತ್ತು ಅಘಖಾನಿಗಳಿಗಾಗಿ ಪ್ರತ್ಯೇಕ ಔಕಾಫ್ ಮಂಡಳಿಯನ್ನು ರಚಿಸುವುದನ್ನು ಪ್ರಸ್ತಾಪಿಸುತ್ತದೆ. ಕರಡು ಕಾನೂನಿನಲ್ಲಿ ಶಿಯಾಗಳು, ಸುನ್ನಿಗಳು, ಬೋಹ್ರಾಗಳು, ಅಗಾಖಾನಿಗಳು ವಕ್ಫ್ ಮಂಡಳಿಗಳಲ್ಲಿ ಪ್ರಾತಿನಿಧ್ಯವನ್ನು ಸಹ ಒದಗಿಸಲಾಗಿದೆ.

ಇದಲ್ಲದೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಿಸಿದ ಲೆಕ್ಕಪರಿಶೋಧಕರಿಂದ ಯಾವುದೇ ವಕ್ಫ್‌ನ ಲೆಕ್ಕಪರಿಶೋಧನೆಯನ್ನು ನಿರ್ದೇಶಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವ ಉದ್ದೇಶವನ್ನು ಶಾಸನವು ಹೊಂದಿದೆ.

ಮೌಖಿಕ ಒಪ್ಪಂದದ ಮೂಲಕ ವ್ಯಕ್ತಿಗೆ ಆಸ್ತಿಯನ್ನು ವಕ್ಫ್ ಆಗಿ ನೀಡಲು ಪ್ರಸ್ತುತ ಕಾನೂನು ಅನುಮತಿಸುತ್ತದೆ.

Share this article

ಟಾಪ್ ನ್ಯೂಸ್

More News