Breaking News :

ಸಾರ್ವಜನಿಕರ ಭೀತಿಗೆ ಕಾರಣವಾಗಿದ್ದ ಬೃಹತ್ ಕಣಜದ ಗೂಡು ನಾಶ – ಪೈಸಾರಿ ಯುವಕರ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ  

 


ಜನವಾಹಿನಿ NEWS ಸಿದ್ದಾಪುರ: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸಿದ್ದ ಬೃಹತ್ ಗಾತ್ರದ ಕಡಜ (ಕಣಜ) ಗೂಡನ್ನು ಸುಟ್ಟು ಹಾಕುವ ಮೂಲಕ ಹೈಸ್ಕೂಲ್ ಪೈಸಾರಿ ಗ್ರಾಮದ ಯುವಕರು ಸಾಮಾಜಿಕ ಕಾರ್ಯ ಮೆರೆದಿದ್ದಾರೆ.

ಸಿದ್ದಾಪುರದ ಬಿಜಿಎಸ್ (BGS) ಶಾಲೆಯ ಮುಖ್ಯ ಗೇಟಿನ ಸಮೀಪದಲ್ಲಿಯೇ ಕಣಜ ಹುಳಗಳು ಬೃಹತ್ ಗಾತ್ರದ ಗೂಡನ್ನು ಕಟ್ಟಿದ್ದವು. ಪ್ರತಿದಿನ ಶಾಲೆಗೆ ಬರುವ ನೂರಾರು ಮಕ್ಕಳು, ಪೋಷಕರು ಹಾಗೂ ಆ ಮಾರ್ಗದಲ್ಲಿ ಓಡಾಡುವ ಸಾರ್ವಜನಿಕರಿಗೆ ಇದು ದೊಡ್ಡ ಆತಂಕವಾಗಿತ್ತು. ಮಕ್ಕಳ ಮೇಲೆ ದಾಳಿ ಮಾಡುವ ಭೀತಿ ಎದುರಾಗಿತ್ತು.

ಇದನ್ನು ಗಮನಿಸಿದ ಸಮೀಪದ ಪೈಸಾರಿ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ತಾವೇ ಮುಂದೆ ಬಂದು ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಗೂಡಿಗೆ ಬೆಂಕಿ ಹಚ್ಚಿ ಸುಟ್ಟು ಹಾಕುವ ಮೂಲಕ ಎಲ್ಲರ ನಿಟ್ಟುಸಿರಿಗೆ ಕಾರಣರಾಗಿದ್ದಾರೆ.

ಕಣಜದ ಗೂಡು ಇದ್ದದ್ದು ವಿದ್ಯುತ್ ತಂತಿ ಹಾದು ಹೋಗುವ ಸ್ಥಳದಲ್ಲಿಯೇ. ಆದ್ದರಿಂದ ಯಾವುದೇ ಅನಾಹುತವಾಗಬಾರದು ಎಂದು ಸ್ಥಳೀಯ ಲೈನ್‌ಮ್ಯಾನ್ ಹನುಮಂತ ಅವರು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಗ್ರಾಮಸ್ಥರ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಪೈಸಾರಿ ಯುವಕರ ಈ ಸಮಯಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಹಾಗೂ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Share this article

ಟಾಪ್ ನ್ಯೂಸ್

More News