Breaking News :

ನ.3 ರಂದು ಮಂಗಳವಾರ ಶಾಸಕ ಡಾ.ಮಂತರ್ ಗೌಡ ಅವರಿಗೆ ಮಡಿಕೇರಿಯಲ್ಲಿ ಪೌರಸನ್ಮಾನ


ಜನವಾಹಿನಿ ನ್ಯೂಸ್ ಮಡಿಕೇರಿ : ಮಡಿಕೇರಿ ನಗರ ದಸರಾ ಸಮಿತಿ , ದಶಮಂಟಪ ಸಮಿತಿ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರಿಗೆ ನ. 3 ರಂದು ಮಂಗಳವಾರ ನಗರದಲ್ಲಿ ಪೌರ ಸನ್ಮಾನ ಆಯೋಜಿತವಾಗಿದೆ.

ನ. 3 ರಂದು ಮಂಗಳವಾರ ಸಂಜೆ 6.30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಸನ್ಮಾನ ಸಮಾರಂಭದಲ್ಲಿ ಮಡಿಕೇರಿ ನಗರ ದಸರಾ ಸಮಿತಿ, ದಶಮಂಟಪ ಸಮಿತಿ, ದಸರಾದ ವಿವಿಧ ಉಪಸಮಿತಿಗಳು, ಸಾವ೯ಜನಿಕ ಸಂಘ ಸಂಸ್ಥೆಗಳು. ಸೇರಿದಂತೆ ಅನೇಕ ಸಂಘಟನೆಗಳಿಂದ ಶಾಸಕ ಡಾ.ಮಂತರ್ ಗೌಡ ಅವರಿಗ ಸನ್ಮಾನ ಆಯೋಜಿತವಾಗಿದೆ. ಇದೇ ಮೊದಲ ಬಾರಿಗೆ ಮಡಿಕೇರಿ ದಸರಾಕ್ಕೆ 2 ಕೋಟಿ ರು. ಅನುದಾನ ನೀಡುವ ಮೂಲಕ ಜನೋತ್ಸವ ದಸರಾವನ್ನು ಯಶಸ್ವಿಯಾಗಿ ಆಯೋಜಿಸಿದ ಶಾಸಕರಿಗೆ ಪೌರ ಸನ್ಮಾನದ ಮೂಲಕ ಕೖತಜ್ಞತೆಯನ್ನು ಸಲ್ಲಿಸಲಾಗುತ್ತಿದೆ.

Share this article

ಟಾಪ್ ನ್ಯೂಸ್

More News