Breaking News :

ಕ್ರೀಡಾಕೂಟದಲ್ಲಿ ಸಾಧನೆ – ರಾಜ್ಯಮಟ್ಟಕ್ಕೆ ಆಯ್ಕೆಯಾದ ಕೊಡಗಿನ ವಿದ್ಯಾರ್ಥಿಗಳು

 


ಜನವಾಹಿನಿ ನ್ಯೂಸ್ ಮಡಿಕೇರಿ : ಮಕ್ಕಳ ಕ್ರೀಡೆಯ ಸಾಧನೆಯು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಪಿ.ಆರ್.ಅವರು ತಿಳಿಸಿದರು.

ನವೆಂಬರ್, 03 ರಿಂದ 05 ರವರೆಗೆ ಕೂಡಿಗೆ ಸ.ಪ.ಪೂ ಕಾಲೇಜು ಇವರ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಪ.ಪೂ.ಕಾಲೇಜುಗಳ ಮೇಲಾಟ ಮತ್ತು ಪಂದ್ಯಾಟದ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಕಾಲೇಜಿನ ಹಿರಿಯ ಉಪನ್ಯಾಸಕರಾದ ಚಿದಾನಂದ.ಎನ್.ಎಸ್, ಅನಿಲ್ ಕುಮಾರ್, ಮಮತ ಸಿ.ಎಂ., ಮುಕ್ತಕೇಶಿ.ಪಿ.ಆರ್, ಶಿವಪ್ಪ ವಿ.ವಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಮೇಲ್ವಿಚಾರಣೆಯಲ್ಲಿ ತೆರಳಿದ್ದ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ಕಾಲೇಜಿನ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸುದನ್ವ ಜಿ. ಎಸ್. ಇವರು ಬಾಲಕರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಬಾಲಕರ 3000 ಮೀ ಮತ್ತು 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಮತ್ತು ಬಾಲಕರ 5000 ಮೀ ನಡಿಗೆ ಸ್ಪರ್ಧೆಯಲ್ಲಿ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶಾಂತ್ ಸಿ.ಡಿ. ಪ್ರಥಮ ಸ್ಥಾನ. ಬಾಲಕಿಯರ ವಿಭಾಗದ ಗುಡ್ಡಗಾಡು ಓಟದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ತೀರ್ಥಕುಮಾರಿ ಐದನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಂದ್ಯಾಟ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ತ್ವಿμÁ ದೇಚಮ್ಮ ಸಿ.ಎನ್, ಸೀತಮ್ಮ ಎನ್ ವಿ, ಕನಗಶ್ರೀ ಕೆ.ಎಸ್, ತಲಹರಿ ಹೇಮ, ಮದ್ದಿಲೆಟ್ಟಿ ಭಾನುತೇಜ, ಮತ್ತಿಯದ್ದುಲ ಮೈಥಿಲಿ, ಎ.ಜೆ.ಪರ್ಲಿನ್ ಪೊನ್ನಮ್ಮ ನ್ನಮ್ಮ, ಶೇಕ್ ಸುಮಿಯಾ, ಅಕ್ಷರ ತಿಮ್ಮಯ್ಯ ಕೆ.ಪಿ., ಸಬಿತಾ ಎ, ಪೂರ್ವಿ ಪೂವಮ್ಮ ಕೆ.ಎ., ರಮಾವತ್ ವರ್ಷ, ತಲಹರಿ ಹರ್ಷಿತಾ ಅವರು ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಸಿಬ್ಬಂದಿಯವರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದರು.

Share this article

ಟಾಪ್ ನ್ಯೂಸ್

More News