ಜನವಾಹಿನಿ ನ್ಯೂಸ್ ಮಡಿಕೇರಿ : 2018 ರಿಂದ ಇಲ್ಲಿಯವರೆಗೆ ಸ್ಥಿರವಾಗಿದ್ದ ಕೊಡಗು ಜಿಲ್ಲೆಯ ಖಾಸಗಿ ಬಸ್ ಪ್ರಯಾಣ ದರ ಇದೀಗ ಏರಿಕೆಯಾಗಲಿದೆ.
ನವೆಂಬರ್ 11ರಿಂದ ದರ ಶೇ. 10 ರಿಂದ 20 ರಷ್ಟು ಹೆಚ್ಚಾಗಲಿದೆ ಎಂದು ಕೊಡಗು ಬಸ್ ಮಾಲೀಕರ ಸಂಘದ ಅಧ್ಯಕ್ಷ ಜನಾರ್ಧನ್ ಪ್ರಭು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ದರದ ಏರಿಕೆ ಈಗಾಗಲೇ ಶೇ. 23ರಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಕೋವಿಡ್ಗೂ ಮೊದಲು ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಖಾಸಗಿ ಬಸ್ಗಳು ಓಡಾಡುತ್ತಿದ್ದವು. ನಂತರ 50 ಬಸ್ಗಳು ಸಂಚಾರ ಸ್ಥಗಿತಗೊಳಿಸಿದೆ. ಈಗ ಕೇವಲ 110 ಬಸ್ಗಳು ಮಾತ್ರ ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೂಣಚ್ಚ, ಪ್ರಮುಖರಾದ ಜಯಂತ್, ಸುಬ್ರಮಣ್ಯ, ಉಮೇಶ್, ದಿಲನ್ ಚಂಗಪ್ಪ ಉಪಸ್ಥಿತರಿದ್ದರು.
Total Views: 5






