Breaking News :

ಕಾಫಿ ತೋಟಗಳ ನಡುವೆ ಶರ ವೇಗದಲ್ಲಿ ಪೈಪೋಟಿ ನೀಡಿದ ರ್‍ಯಾಲಿ ಪಟುಗಳು – ಕಾರುಗಳ  ಪೈಪೋಟಿಗೆ ಪ್ರೇಕ್ಷಕರು ಫುಲ್ ಫಿದಾ 


ಚಾಲನೆ ಸಂದರ್ಭ ಪಲ್ಟಿಯಾದ ಎರಡು ಕಾರು – 2ನೇ ದಿನ ತಾಂತ್ರಿಕ ದೋಷದಿಂದ ಹೊರಗುಳಿದ 10ಕ್ಕೆೊ ಹೆಚ್ಚು ಕಾರುಗಳು

ಜನವಾಹಿನಿ News ಮಡಿಕೇರಿ :  ಬ್ಲೂ ಬ್ಯಾಂಡ್  ಎಫ್ಎಂ ಎಸ್‌ಸಿಐ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಶಿಪ್
ನೇತೃತ್ವದಲ್ಲಿ  ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಾಹಕಾರದೊಂದಿಗೆ ರೋಬಸ್ಟಾ 2025 ರ್‍ಯಾಲಿಯು ಪಾಲಿಬೆಟ್ಟ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಡಿದಾದ ರಸ್ತೆಯಲ್ಲಿ  ಸಂಚರಿಸಿ
 ಗುರಿ ಮುಟ್ಟಲು ಅರಸಹಾಸ ಪಟ್ಟಲು.
 ನಿಗದಿತ ಸಮಯ ಮುಟ್ಟಲು ತಾ ಮುಂದು ನಾ ಮುಂದು ಎಂಬಂತೆ   ಕಾರುಗಳು ಸರವೇಗದಲ್ಲಿ ಸಂಚರಿಸಿ  ರಸ್ತೆಯುದ್ದಕ್ಕೂ ದೂಳೆಬ್ಬಿಸಿದವು.
ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಪಾಂಡಿ, ಗೋವಾ, ಪೂನಾ, ಚಂಡಿಗಡ್, ಕಲ್ಕತ್ತಾ ಸೇರಿದಂತೆ ವಿವಿಧ ರಾಜ್ಯಗಳಿಂದ 58 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಇಂಡಿಯನ್ ನ್ಯಾಷನಲ್  ರ್‍ಯಾಲಿ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಸ್ಪರ್ಧೆ ಟಾಟಾ ಕಾಫಿ ಸಂಸ್ಥೆಯ ಕಾಫಿ  ಎಸ್ಟೇಟ್‌ನಲ್ಲಿ  ನಡೆಯಿತು. ಕೊಡಗಿನಲ್ಲಿ ಸತತ ಮೂರನೇ ಭಾರಿಗೆ ಆಯೋಜಿಸಲ್ಪಟ್ಟಿರುವ ಇಂಡಿಯನ್ ನ್ಯಾಷನಲ್  ರ್‍ಯಾಲಿ ಚಾಂಪಿಯನ್‌ಶಿಪ್‌ನ ಜವಾಬ್ದಾರಿಯನ್ನು  ತಿಮ್ಮಣ್ಣ, ಮಾಚಯ್ಯ ಮ್ಯಾಕ್ಸ್ , ಸೋಮಣ್ಣ ಸೇರಿದಂತೆ ಮತ್ತಿತರರು ವಹಿಸಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು . ಅಚ್ಚುಕಟ್ಟಾಗಿ ನಿಭಾಯಿಸಿದರು.
ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಗಳಲ್ಲಿ ಸಂಚರಿಸುವ  ಕಾರು ಹಾಗೂ ರ್‍ಯಾಲಿ ಪಟುಗಳ ಸುರಕ್ಷಿತ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಅನಾಹುತ ಸಂಭವಿಸಿದಂತೆ ಸಕಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತು. ಮೊದಲನೇ ದಿನದಲ್ಲಿ ಮಟ್ಟಪರಂಬು ಎಮ್ಮೆಗುಂಡಿ, ಆನಂದಪುರ ಮಾರ್ಗವಾಗಿ ಸಂಚರಿಸಿದ 58  ಕಾರುಗಳ ಪೈಕಿ 10ಕ್ಕೊ ಹೆಚ್ಚು ಕಾರುಗಳು ತಾಂತ್ರಿಕ ದೋಷ ಕಂಡ ಹಿನ್ನೆಲೆ  ಎರಡನೇ ದಿನದ ಸಂಚಾರದಲ್ಲಿ ಅಲ್ಪ ಕಾರುಗಳು ಮಾತ್ರ ಸಂಚರಿಸಿದವು.
 ಜಿಲ್ಲೆಯ ಸುತ್ತಮುತ್ತಲ  ಸಾರ್ವಜನಿಕರು, ಕಾರ್ಮಿಕರು  ಹೆಚ್ಚಿನ ಸಂಖ್ಯೆಯಲ್ಲಿ ತೋಟದ ಮಾರ್ಗಮದ್ದೆ  ಬೆಳಗಿನಿಂದ ಸಂಜೆವರೆಗೆ ಕಾದು ಕುಳಿತು  ರ್ಯಾಲಿಪಟ್ಟುಗಳಿಗೆ ಉರಿದುಂಬಿಸಿದರು.
ಅಚ್ಚ ಹಸಿರಿನಿಂದ ಕೂಡಿದ ಕಾಫಿ ತೋಟಗಳ ಕಡಿದಾದ ರಸ್ತೆಯಲ್ಲಿ ಸಂಚರಿಸಿದ ರ್ಯಾಲಿಪಟ್ಟುಗಳು  ಸವಾಲಿನೊಂದಿಗೆ ಸಂಚರಿಸಿ  ಗುರಿ ಮುಟ್ಟಿದರು.

Share this article

ಟಾಪ್ ನ್ಯೂಸ್

More News