ಜನವಾಹಿನಿ ನ್ಯೂಸ್ ಚೆಯ್ಯಂಡಾಣೆ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯೋತ್ಸವ ಕ್ರೀಡಾಕೂಟದಲ್ಲಿ ನರಿಯಂದಡ, ಕೊಕೇರಿ ಹಾಗೂ ಚೇಲಾವರ ಗ್ರಾಮಗಳ ತಂಡಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿಯೊಂದಿಗೆ ಗಮನ ಸೆಳೆದವು.
ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಂ.ವಿಮಲಾ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೂರು ಗ್ರಾಮಗಳ ಜನರು ಒಗ್ಗೂಡಿ ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ಕ್ರೀಡಾಕೂಟದಿಂದ ಶಾಲಾ ಮೈದಾನಕ್ಕೆ ಹೊಸ ಕಳೆ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಚೇನಂಡ ಎಂ. ಸಂಪತ್ ಅಧ್ಯಕ್ಷತೆ ವಹಿಸಿದ್ದರು.

ಕ್ರೀಡಾಕೂಟದಲ್ಲಿ ಫುಟ್ಬಾಲ್, ತ್ರೋಬಾಲ್, ವಾಲಿಬಾಲ್, ಟೆನ್ನಿಕಾಯ್ಟ್, ಮಹಿಳೆಯರ ಹಗ್ಗಜಗ್ಗಾಟ ಹಾಗೂ ಪುರುಷರ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಮೂರು ಗ್ರಾಮಗಳ ತಂಡಗಳು ಸಮಬಲದ ಪೈಪೋಟಿ ನೀಡುವ ಮೂಲಕ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು.
ಫುಟ್ಬಾಲ್‌ನಲ್ಲಿ ನರಿಯಂದಡ ತಂಡಕ್ಕೆ ಚಾಂಪಿಯನ್ ಪಟ್ಟ
ಚೇಲಾವರ ಹಾಗೂ ಕೊಕೇರಿ ತಂಡಗಳ ನಡುವಿನ ಮೊದಲ ಫುಟ್ಬಾಲ್ ಪಂದ್ಯಕ್ಕೆ ಗಣ್ಯರು ಚಾಲನೆ ನೀಡಿದರು. ಪಂದ್ಯದಲ್ಲಿ ಕೊಕೇರಿ ತಂಡವು ಚೇಲಾವರ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯದಲ್ಲಿ ನರಿಯಂದಡ ತಂಡವು ಕೊಕೇರಿ ತಂಡವನ್ನು 2-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೊಕೇರಿ ತಂಡ ರನ್ನರ್ಸ್ ಅಪ್ ಸ್ಥಾನ ಪಡೆದುಕೊಂಡಿತು.

ಇತರ ಸ್ಪರ್ಧೆಗಳ ಫಲಿತಾಂಶ
ತ್ರೋಬಾಲ್ ಫೈನಲ್‌ನಲ್ಲಿ ಕೊಕೇರಿ ತಂಡವು ಚೇಲಾವರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿದರೆ, ಚೇಲಾವರ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ವಾಲಿಬಾಲ್ ಫೈನಲ್‌ನಲ್ಲಿ ಕೊಕೇರಿ ತಂಡವು ನರಿಯಂದಡ ತಂಡವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ನರಿಯಂದಡ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಟೆನ್ನಿಕಾಯ್ಟ್ ಫೈನಲ್‌ನಲ್ಲಿ ಚೇಲಾವರ ತಂಡವು ನರಿಯಂದಡ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದರು ನರಿಯಂದಡ ತಂಡ ದ್ವಿತೀಯ ಸ್ಥಾನಕ್ಕೆ ಆಯ್ಕೆ ಯಾದರು.
ಪುರುಷರ ರೋಚಕ ಹಣಹಣಿ ಯಿಂದ ಕೂಡಿದ್ದ ಹಗ್ಗಜಗ್ಗಾಟ ಸ್ವರ್ಧೆಯಲ್ಲಿ ನರಿಯಂದಡ ತಂಡ ಕೊಕೇರಿ ತಂಡವನ್ನು ಸೋಲಿಸಿ ಫೈನಲ್ ಗೆ ಅರ್ಹತೆ ಪಡೆದರು. ಫೈನಲ್ ನಲ್ಲಿ ಚೇಲಾವರ ತಂಡವನ್ನು ಎದುರಿಸಲಿದೆ.

ಇಂದಿನ ಪಂದ್ಯ
ಪುರುಷರ ಹಗ್ಗಜಗ್ಗಾಟ
ನರಿಯಂದಡ vs ಚೇಲಾವರ
ಮಹಿಳೆಯರ ಹಗ್ಗಜಗ್ಗಾಟ
ಕೊಕೇರಿ vs ಚೇಲಾವರ
ಇಂದು ಸಮಾರೋಪ ಸಮಾರಂಭ
ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಚೇನಂಡ ಎಂ.ಸಂಪತ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಚೆಯ್ಯಂಡ ಕುಟುಂಬದ ಹಿರಿಯರು,ಪ್ರಗತಿಪರ ಕೃಷಿಕ ಮಕ್ಕಿಮನೆ ಸುಧೀರ್, ಚೇಲಾವರದ ಪ್ರಗತಿಪರ ಕೃಷಿಕ ಹಾಗೂ ನಾಟಿವೈದ್ಯರಾದ ಪಡಿಂಞರಮ್ಮಂಡ ನಂದಕುಮಾರ್, ಕೊಕೇರಿಯ ಪ್ರಗತಿಪರ ಕೃಷಿಕ ಕುಮ್ಮಂಡ ಪಿ. ಕಾವೇರಪ್ಪ, ಸಿಐಡಿ ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ ಕುಪ್ಪೋಡಂಡ ಎ. ರಫೀಕ್ ಎಡಪಾಲ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ, ಕ್ರೀಡಾಪಟು ಹಾಗೂ ಪೋಸ್ಟ್ ಮಾಸ್ಟರ್ ಪಟ್ಟಚೇರುವಂಡ ಜೀವನ್ ಮುದ್ದಪ್ಪ ಮತ್ತು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಂ.ವಿಮಲಾ ಪಾಲ್ಗೊಳ್ಳಲಿದ್ದಾರೆ.







